ಮನೆಯೊಳಗಾಡೊ ಗೋವಿಂದ-ನೆರೆ-|
ಮನೆಗಳಿಗೇಕೆ ಪೋಗುವೆಯೊ ಮುಕುಂದ
ನೊಸಲಿಗೆ ತಿಲಕವನಿಡುವೆ-ಅಚ್ಚ-|
ಹೊಸಬೆಣ್ಣೆಯಿಕ್ಕಿ ಕಜ್ಜಾಯವ ಕೊಡುವೆ ॥
ಹಸನಾದಾಭರಣಗಳಿಡುವೆ-ಚಿಕ್ಕ-|
ಹಸುಳೆ ನಿನ್ನನು ನೋಡಿ ಸಂತೋಷಪಡುವೆ
ಅಣ್ಣಯ್ಯ ಬಲರಾಮಸಹಿತ-ನೀ-|
ನಿನ್ನೆಲ್ಲಿಯಾದರೂ ಆಡುವುದು ವಿಹಿತ ॥
ಹೆಣ್ಣುಗಳೇಕೋ ಸಂಗಾತ-ರಂಗ ।
ಬಿನ್ನಪ ಪರಿಪಾಲಿಸೊ ಜಗನ್ನಾಥ
ಜಾರನೆನಿಸಿಕೊಳಲೇಕೆ ರಂಗ-|
ಚೋರನೆನಿಸಿಕೊಂಬ ದೂರು ನಿನಗೇಕೆ ॥
ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|
ಪುರಂದರವಿಠಲರಾಯ ಎಚ್ಚರಿಕೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ