ಕೀರ್ತನೆ - 129     
 
ಮಗನೆಂದಾಡಿಸುವಳು ಮೊಗ ನೋಡಿ ನಗುವಳು ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆ ಫಾಲದ ಅರಳೆಲೆಯು ಕುಣಿಯೆ ನೀಲದುಡುಗೆಯಿಟ್ಟ ಬಾಲನೆ ಬಾರೆಂದು ಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ ಬಣ್ಣದ ಸರಗಳಿಡೆ ರನ್ನದ ನೇವಳ ಹೊನ್ನ ಘಂಟೆಯು ಘಣ ಘಣರೆನಲು ಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದು ಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ ಕುಕ್ಷಿಯೊಳೀರೇಳು ಜಗವನು ಸಲಹುವ ರಕ್ಷಿಪರುಂಟೆ ತ್ರಿಜಗದೊಳಗೆ ಪಕ್ಷಿವಾಹನ ನೀನು ಅಂಜಬೇಡೆನುತಲಿ ರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ ಶಂಖ ಚಕ್ರಗದಾ ಪದುಮಧಾರಕನ ಪಂಕಜ ಮಿತ್ರ ಶತಕೋಟಿತೇಜನನು ಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅ ಲಂಕರಿಸುವ ಪುಣ್ಯವೆಂತು ಪಡೆದಳಯ್ಯ ಸಾಗರಶಯನನು ಭೋಗೀಶನ ಮೇಲೆ ಯೋಗನಿದ್ದೆಯೊಳಿಪ್ಪ ದೇವನನು ಆಗಮ ನಿಗಮಗಳರಸ ಕಾಣದ ವಸ್ತು ತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ ಪನ್ನಗ ಶಯನ ಉನ್ನಂತ ಮಹಿಮನ ಸನ್ನುತ ಭಕುತರ ಸಲಹುವನ ಪನ್ನಗಾರಿ ವಾಹನ ದೇವರ ದೇವ ಚೆನ್ನಕೇಶವನ ಪಡೆದಳಯ್ಯಾ *