ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-1
ರಕ್ಕಸ ಶಕಟನ ತುಳಿದುದೀಪಾದವೆ
ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ ।
ಜಲಧಿಯ ಪಡೆದದ್ದು ಈ ಪಾದವೆ ।।
ಹಲವು ಕಾಲಗಳಿಂದ ಶಿಲೆ ಶಾಪವಡೆದಿರಲು |
ಫಲಕಾಲಕ್ಕೊದಗಿದುದೀ ಪಾದವೆ
ಕಡುಕೋಪದಿ ಕಾಳಿಂಗನ ಮಡುವ ಕಲಕಿ |
ಹೆಡೆಯನು ತುಳಿದುದು ಈ ಪಾದವೆ ॥
ಸಡಗರದಿಂದ ಕೌರವನ ಸಿಂಹಾಸನವ |
ಹೊಡೆಮಗುಚಿ ಕೆಡಹಿದುದೀ ಪಾದವೆ
ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ ।
ಅಂಗನೆಯರೊತ್ತುವುದೀ ಪಾದವೆ ।
ಸಂಗಸುಖದಿಂದ ಶ್ರೀ ಪುರಂದರವಿಠಲನ |
ಅಂಗದೊಳಡಗಿದ್ದುದೀ ಪಾದವೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ