ಬೇಡವೆನ್ನೆ ನೀನು ಗೋಪಮ್ಮ
ಕಾಡುವ ಕೃಷ್ಣಗೆ ಕರೆದು ಬುದ್ದಿಯ ಹೇಳೆ
ಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |
ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||
ಬೆನ್ನು ಒರಸಲು ಬಂದ-ಬೆದರೇಶ್ವರ |
ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |
ಚಿಣ್ಣ ಸಿರಿಗೇಡಿಯು ಎನ್ನ ನಾಚಿಕೆಗೊಂಡ
ನೆಲುವಿಗೆ ಹಾಲ ಏರಿಸುವಳ ಕೈವಿಡಿದು ।
ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||
ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |
ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |
ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ
ಮನೆಮನೆಯೊಳು ದಂಪತಿಗಳಿದ್ದ ಮಂಚ-।
ವನು ನಡು ಬೀದಿಯೊಳ್ ಹಾಕಿ ಕೆಲೆವನೆ ಕೃಷ್ಣ ॥
ಮನು ಮಥನಯ್ಯ ಕಾಣೆ-ಈತನು ಮಹಾ ।
ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |
ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ