ಕೀರ್ತನೆ - 126     
 
ಬೂಚಿ ಬಂದಿದೆ-ರಂಗ-ಬೂಚಿ ಬಂದಿದೆ ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೋ ಕೃಷ್ಣಯ್ಯ ನಾಕು ಮುಖದ ಬೂಚಿಯೊಂದು । ಗೋಕುಲಕ್ಕೆ ಓಡಿ ಬಂದು ।। ತೋಕರನ್ನು ಎಳೆದುಕೊಂಡು ! ಕಾಕುಮಾಡಿ ಒಯ್ಯುವುದಕೆ ಮೂರು ಕಣ್ಣಿನ ಬೂಚಿಯೊಂದು । ಊರು ಊರು ಸುತ್ತಿ ಬಂದು ।। ದ್ವಾರದಲ್ಲಿ ನಿಂದಿದೆ ನೋಡೊ । ಪೋರರನ್ನು ಒಯ್ಯುವುದಕೆ ಅಂಗವೆಲ್ಲ ಕಂಗಳುಳ್ಳ | ಶೃಂಗಾರ ಮುಖದ ಬೂಚಿ ॥ ಬಂಗಾರದ ಮಕ್ಕಳನೆಲ್ಲ | ಕಂಗೆಡಿಸಿ ಒಯ್ಯುವುದಕೆ ಆರು ಮುಖದ ಬೂಚಿಯೊಂದು | ಈರಾರು ಕಂಗಳದಕೆ | ಬಾರಿ ಬಾರಿ ಅಳುವ ಮಕ್ಕಳ | ದೂರ ಸೆಳೆದು ಒಯ್ಯುವುದಕೆ ಮರದ ಮೇಲೆ ಇರುವುದೊಂದು । ಕರಿಕರಾಳದ ಮುಖದ ಬೂಚಿ ॥ ತರಳರನ್ನು ಎಳೆದುಕೊಂಡು | ಪುರಂದರವಿಠಲಗೊಪ್ಪಿಸಲಿಕ್ಕೆ