ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ
|ಬಾರೇ ಗೋಪಮ್ಮ - ನಾವ್ ॥
ಆರೂ ತೂಗಿದರೂ ಮಲಗನು ಮುರವೈರಿ
ಬಾರೇ ಗೋಪಮ್ಮ
ನೀರೊಳಗಾಡಿ ಮೈಯೊರಸೆಂದು ಆಳುತಾನೆ_ಬಾರೆ-|
ಮೇರುವ ಹೊತ್ತು ಮೈಭಾರವೆಂದಳುತಾನೆ-ಬಾರೆ-||
ಧರೆಯ ನೆಗಹಿ ತನ್ನ ದಾಡೆನೊಂದಳುತಾನೆ-ಬಾರೆ-|
ದುರುಳ ರಕ್ಕಸನ ಕರುಳ ಕಂಡಳುತಾನೆ-ಬಾರೆ-
ನೆಲವನಳೆದು ಪುಟ್ಟ ಚರಣನೊಂದಳುತಾನೆ-ಬಾರೆ-|
ಛಲದಿಂದ ಕೊಡಲಿಯ ಪಿಡಿವೆನೆಂದಳುತಾನೆ-ಬಾರೆ-||
ಬಲುಕಪಿಗಳ ಕಂಡಂಜಿಕೊಂಡಳುತಾನೆ-ಬಾರೆ-||
ನೆಲುವಿನ ಬೆಣ್ಣೆ ಕೈ ನಿಲುಕದೆಂದಳುತಾನೆ-ಬಾರೆ-
ಬಟ್ಟ ಬತ್ತಲೆ ನಿಂತು ಎತ್ತಿಕೊಯೆಂದಳುತಾನೆ-ಬಾರೆ-|
ಶ್ರೇಷ್ಠ ತೇಜಿಯನ್ನು ಹತ್ತಿಸೆಂದಳುತಾನೆ-ಬಾರೆ-||
ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ-ಬಾರೆ-|
ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ-ಬಾರೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ