ಬಣ್ಣಿಸಿ ಗೋಪಿ ತಾ ಹರಸಿದಳು |
ಎಣ್ಣೆಯನೂಡುತ ಯದುಕುಲತಿಲಕನ
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಾಯಾವಿ ಖಳರ ಮರ್ದನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯುಸುತಗೆ ನೀ ಒಡೆಯನಾಗೆನುತಲಿ
ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಷ್ಮಿಣಿಗೆ ನೀನರಸನಾಗು ||
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀಧರ ನೀನಾಗು |
ಜ್ಞಾನಿ ಪುರಂದರವಿಠಲನಾಗೆನುತಲಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ