ಕೀರ್ತನೆ - 109     
 
ನಿನ್ನ ಮಗನ ಮುದ್ದು ನಿನಗಾದರೆ ಗೋಪಿ ಆರಿಗೇನೆ? । ಎನ್ನ ಕೂಡ ಸರಸವಾಡಲು ಓರಗೆಯೇನೆ? ಹೆಚ್ಚಿನ ಸತಿಯರ ಕಚ್ಚೆಯ ಬಿಚ್ಚುವ ಹುಚ್ಚನೇನೆ?-ಅಮ್ಮ | ಇಚ್ಛೆಯರಿತು ನಮ್ಮ ಗಲ್ಲವ ಕಚ್ಚುವ ನೆಚ್ಚನೇನೆ? ಚೆಂಡೆಂದು ಮಿಂಡೆಯರ ದುಂಡು ಕುಚವ ಪಿಡಿವ ಗಂಡನೇನೆ? । ಕಂಡಕಂಡಲ್ಲಿ ಉದ್ದಂಡವ ಮಾಡುವ ಪುಂಡನೇನೆ ಹೊಸ ಕೂಟವರಿತು ಹಾಸಿಗೆಯನು ಹಾಕುವ ಶಿಶುವು ಏನೆ? । ಅಸಹಾಯ ಶೂರ ಶ್ರೀ ಪುರಂದರವಿಠಲರಾಯ ಕಾಣೆ