ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|
ಗುಮ್ಮನು ಎಳೆದೊಯ್ವನು
ಎಡದ ಕೈಯಲಿ ಕಪಾಲ-ಗೋಪಾಲಾ-|
ಬಲದ ಕೈಯಲಿ ತ್ರಿಶೂಲ |
ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |
ಅಲೆದು ಸ್ಮಶಾನವ ತಿರುಗುವನಂತೆ
ಮೂರು ಕಣ್ಣಿನವನೊ-ಗೋಪಾಲಾ- |
ಐದು ತಲೆಗಳವನೊ ||
ದಾರಿಯ ಪೋಗುವ ನಾರಿಯನೆಳತಂದು |
ಸೇರಿಸಿ ಶಿರದಲ್ಲಿ ಹೊತ್ತನೊ
ಚಂದ್ರನರ್ಧವ ಪಿಡಿದು-ತಲೆಯ ಮೇಲೆ-
ಚೆಂದಕಿಟ್ಟಿರುವನಂತೆ |
ಅಂದಗಾರನಂತೆ [ ಅನಲನೇತ್ರನಂತೆ ] |
ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ
ನಿನ್ನ ಮಗನ ಮಗನೊ-ಗೋಪಾಲಾ-
ಪನ್ನಗ ಭೂಷಣನೋ ||
ಧನ್ಯನಾಗಿ ಶ್ರೀರಾಮ ನಾಮವನು |
ಚೆನ್ನಾಗಿ ಚಿಂತಿಪನೊ
ಕರಿಯಜಿನ ಪೊದ್ದವನೊ ಗೋಪಾಲಾ-|
ನೆರೆದ ಭೂತ ತಂದವನೊ ||
ಶರಧಿಶಯನ ನಿನ್ನ ಚರಣಪಂಕಜಭೃಂಗ ।
ಪುರಂದರವಿಠಲ ಪನ್ನಂಗಶಯನನೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ