ಕೀರ್ತನೆ - 105     
 
ದೂರು ಮಾಡುವರೇನೆ ರಂಗಯ್ಯನ ದೂರು ಮಾಡುವರೇನೆ |ಚೋರನೆಂದಿವನನ್ನು | ಮೂರು ಲೋಕವನು ಕಾ | ಪಾಡುವ ರಂಗಯ್ಯನ ನಂದ ಗೋಕುಲದಲ್ಲಿ ಕಂದರೊಡಗೂಡಿ ಆ-। ನಂದದಿಂದಲಾಡುವ | ಕಂದ ರಂಗಯ್ಯನ ಗೊಲ್ಲರ ಮನೆಯಲ್ಲಿ | ಕಳ್ಳತನದಲಿ ಪೊಕ್ಕು | ಗಲ್ಲವನು ಪಿಡಿದು ಮುದ್ದಿಡುವ ರಂಗಯ್ಯನೆಂದು ಕಾಮಾಂಧಕಾರದಲಿ |ಕಳವಳಗೊಳಿಸಿದ | ಶ್ಯಾಮಸುಂದರ ರಂಗ | ಸೋಲಿಸಿ ಪೋದನೆಂದು ಮಂಗಲ ಮೂರುತಿ ಪು | ರಂದರವಿಠಲನು । ರಂಗ ಮಂಚದಲಿ ನೆರೆದು |ಹಿಂಗಿ ಪೋದನೆಂದು