ಕೀರ್ತನೆ - 102     
 
ತಾಳು ತಾಳೆಲೊ ರಂಗಯ್ಯ- ನೀ । ತಾಳು ತಾಳೆಲೊ ಕೃಷ್ಣಯ್ಯ ನಾಳೆ ನೀನು ನಮ್ಮ ಮನೆಗೆ ಬಂದರೆ ಕಾಲ ಕಂಬಕೆ ಕಟ್ಟಿ ಪೇಳುವೆ ಗೋಪಿಗೆ ದೊರೆಗಳ ಮಗನೆಂಬುದಕೇನೊ-ಬಹು | ಧುರದಿ ಮನೆಯ ಪೊಕ್ಕ ಪರಿಯೇನೊ || ದುರುಳತನದ ಬುದ್ಧಿ ಸರಿಯೇನೊ-ನೀನು | ತಿರಿದು ಬೇಡುಂಡದ್ದು ಮರೆತೆಯೇನೊ ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ । ಕಕ್ಕುಲಾತಿಯಿಂದಲಿ ನಿನ್ನ || ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ | ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ ಕಟ್ಟಿದ ತುರುಗಳ ಮೊಲೆಯುಂಡು-ಕರು | ಬಿಟ್ಟ ಕಾರಣವೇನು ಹೇಳೊ || ಸೃಷ್ಟೀಶ ಪುರಂದರವಿಠಲರಾಯನೆ । ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ?