ಕೀರ್ತನೆ - 101     
 
ತಾರಮ್ಮಯ್ಯ-ಯದುಕುಲ- ವಾರಿಧಿ ಚಂದ್ರಮನ ಮಾರಜನಕನ-ಮೋಹನಾಂಗನ-| ಸೇರಿ ಸುಖಿಸಿ ಹಾರೈಸಿ ಬಂದೆವು ಬಿಲ್ಲು ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ || ಮಲ್ಲಕಾಳಗ ಮದ್ದಾನೆಗಳಂತೆ | ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ || ಒದಗಿದ ಮದಗಜ ತುರಗ ಸಾಲಿನಲಿ | ಮದನಮೋಹನ ಕೃಷ್ಣ ಮಧುರೆಗೆ ತೆರಳಿದ ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ || ಭಕ್ತವತ್ಸಲನ ಬಹು ನಂಬಿದ್ದೆವು । ಉತ್ಸಾಹ ಭಂಗವ ಮಾಡಿದನಮ್ಮ ರಂಗನ ನೆರೆನಂಬಿ ಬಂದೆವು-ಸಂಗ ಸುಖವ ಬಯಸಿ | ಭಂಗಿಸಿ ನಮ್ಮನು ಹಾಗೆ ಪೋದನಮ್ಮ | ಮಂಗಳ ಮೂರುತಿ ಮದನ ಗೋಪಾಲನು ಶೇಷಗಿರಿಯ ಮೇಲೆ-ಹರಿ ತಾ-ವಾಸವಾಗಿಹ ಕಾಣೆ ॥ ಸಾಸಿರನಾಮದ ಒಡೆಯನೆಂದೆನಿಸಿದ | ಶ್ರೀ ಪುರಂದರವಿಠಲರಾಯನ