ಕೀರ್ತನೆ - 95     
 
ಗೋಪಿ ನಿನ್ನ ಮಗನಿಗಾಗೆ-ಕೇರಿಯ ಬಿಟ್ಟು | ಪೋಪೆವೆ ಬೆಳಗಾಗೆ ಮಕ್ಕಳನಾಡಗೊಡ-ಮನೆಯ ಹೊಕ್ಕು | ಉಕ್ಕುವ ಪಾಲ್ ಕುಡಿವ॥ ಗಕ್ಕನೆ ಕಂಡರೊಡನೆ ನಮ್ಮೆಲ್ಲರ ಕೈಗೆ | ಸಿಕ್ಕದೆ ಓಡಿದನೆ ಮೊಸರನೆಲ್ಲವ ಸುರಿದ-ಮೇಲಿಟ್ಟಂಥ । ಹೊಸಬೆಣ್ಣೆಗೆ ತಾ ಹಾರಿದ || ಕೊಸರಿ ನೆಲುವಿನ ಮೇಲಿಂದ ಕೃಷ್ಣ ತಾ | ಮುಸುಕಿನೊಳಗೆ ಸುರಿದ ಅಂತಿಂಥವನಲ್ಲ ಕಾಣೆ-ನಿನ್ನವ ಜಗ-| ದಂತರ್ಯಾಮಿಯು ಜಾಣೆ ॥ ಅಂತರಂಗದಲ್ಲಿ ನೋಡಲು ಪುರಂದರ-| ವಿಠಲ ಬಂದಿದ್ದ ಕಾಣೆ