ಕೇಳೆ ಗೋಪಿ ಗೋಪಾಲ ಮಾಡಿದ ಬಲು |
ದಾಳಿಯ ಗೋಕುಲದಿ
ತಾಳಲಾರೆವೆ ತವಕದಲಿ ಕಂದಗೆ ಬುದ್ಧಿ |
ಹೇಳೆ ಕೃಷ್ಣನ ಕರೆದು
ಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |
ಸುರಿದು ಪಾಲ್ಬೆಣ್ಣೆಗಳ |
ಉರೋಜಗಳಿಗೆ ಕರ ಸರಿಸಿ ಕಣ್ಗಳನು |
ತೆರೆದು ನೋಡುವನೆ ನಮ್ಮ
ಗಂಡನು ಮನೆಯೊಳಗಿರಲು ಬಂದು ಕೃಷ್ಣ |
ಭಂಡ ಮಾತುಗಳ ಬಹು |
ತುಂಟತನದಲಾಡಿ ಉದ್ದಂಡ ಕಠಿಣಕಾಯ |
ದುಂಡುಕುಚವ ಪಿಡಿದ
--------------------ವದ ಮೇಲಿರಲು ತಾ |
ಸೀರೆಯ ಸೆಳೆವ ನೋಡೆ ||
ಆರಿವರೆಂದು ವಿಚಾರಿಸಿ ನೋಡಲು |
ಮೋರೆಯ ಬಾಗಿದನೆ
ಕೇರಿಯೊಳಗೆ ದಧಿ ಮಾರುತಿರಲು ಕೃಷ್ಣ |
ಸಾರಿ ಬಂದು ಮೊಸರ |
ಸೂರೆಗೊಂಡು ಪರನಾರಿಯರ ನೆರೆದು ತಾ |
ಘೋರರೂಪದಿ ಮೆರೆದ
ಆಡಲೇತಕೆ ನಮ್ಮ ಬಾಗಿಲಂಗಳದೊಳು |
ಬೇಡುವ ಜಲ ದೈನ್ಯದಿ ||
ನೀಡುವೆ ಜಲ ಜಲಜಾಕ್ಷ ಬಾಬಾ ಎನೆ ।
ಮಾಡುವ ರತಿ ಎಂಬನೆ
ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |
ಉಡೆಮುಡಿ ಪಿಡಿದ ನೋಡೆ ||
ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚು |
ಕೊಡಲಿ ತೋರುವನೆ ಗೋಪಿ
ಮಡದಿಯರೆಲ್ಲರು ಮೀಯುತಲಿರೆ ಮೈ |
ಉಡುಗೆಯ ತೆಗೆದುಕೊಂಡು ॥
ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು ।
ಕೊಡದೆ ಅಡವಿಗೆ ನಡೆದ
ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |
ಚಿಣ್ಣರ ಬಡಿವ ನೋಡೆ ||
ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |
ಬೆಣ್ಣೆಯ ತಿಂದಿರೆಂಬ
ಏಣಲೋಚನೆ ಸರ್ಪವೇಣಿ ನಮ್ಮ ಮನೆ |
ಓಣಿಯೊಳಗೆ ಪೋಗುತ
ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |
ತ್ರಾಣವ ತೋರಿದನೆ
ಪದುಮನಾಭನು ಪುರದ ಚದುರಿಯರಿಗೆ ತಾನು |
ಮದನಶಾಸ್ತ್ರವ ಪೇಳುತ ||
ಮುದದೊಳಗಿರಲವರೊಡೆಯ ಬರಲು ಕೃಷ್ಣ |
ಕುದುರೆಯನೇರಿದನೆ
ಎಷ್ಟುಪದ್ರವ ಕೊಟ್ಟರು ಗೋಕುಲದೊಳು |
ಬಿಟ್ಟವನಿರಲಾರೆವೆ ॥
ಸೃಷ್ಠಿಯೊಳಗೆ ಸರ್ವಾಭೀಷ್ಟದ ಪುರಂದರ-|
ವಿಠಲ ಸಲಹುವನೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ