ಕೀರ್ತನೆ - 86     
 
ಕೂಸು ಕಂಡೆವಮ್ಮ-ಅಮ್ಮ ನಿಮ್ಮ- ಕೂಸು ಕಂಡೆವಮ್ಮ ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು | ಶೇಷಗಿರಿಯ ಮೇಲೆ ವಾಸವಾಗಿಪ್ಪನೆ ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು | ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ ಗುಡ್ಡ ಬೆರಳಲತ್ತಿ ದೊಡ್ಡಿ ಗೋಗಳ ಕಾಯ್ದ | ಒಡ್ಡಿ ಜಗನ್ನಾಥ ಗಿಡ್ಡಾಗಿಪ್ಪನೆ ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು । ಹಡಗನೇರಿ ಬಂದು ಉಡುಪಿಯಲಿಪ್ಪನೆ ಮಂಗಳರೇಖೆ ಪದಂಗಳುಳ್ಳ ನಿಮ್ಮ | ರಂಗ ಪುರಂದರವಿಠಲ ಶ್ರೀ ಕೃಷ್ಣ