ಕೀರ್ತನೆ - 84     
 
ಕೂಗದೆ ಉಸುರಿಕ್ಕದೆ- ನೀವು | ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಹೆಜ್ಜೆಗಳಿವೆಕೋ ಮನೆಯಲಿ-ಕಾಲ | ಗೆಜ್ಜೆಯ ದನಿ ಕೇಳಬರುತಲಿದೆ || ನಿರ್ಜರಪತಿ ತನ್ನ ಮನಸಿಗೆ ಬಂದಂತೆ । ಮಜ್ಜಿಗೆ ಓಕುಳಿ ಆಡಿಹನಕ್ಕ ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ । ಓರಗೆ ಮಕ್ಕಳುಗಳ ನಿಲ್ಲಿಸಿ | ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ । ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ | ಮೇಲಿನ ಕೆನೆಗಳು ಬಳಿದಿಹವೆ || ಬಾಲಚೋರ ಶ್ರೀ ಪುರಂದರವಿಠಲನು । ಚಾಲುವರಿದರಿನ್ನು ಬಿಡಬಾರದಕ್ಕ