ಕೀರ್ತನೆ - 79     
 
ಕಂದ ಹಾಲ ಕುಡಿಯೊ-ನಮ್ಮ ಗೋ-| ವಿಂದ ಹಾಲ ಕುಡಿಯೊ ವೃಂದಾವನದೊಳು ಬಳಲಿ ಬಂದೆಯೊ ರಂಗ ಶೃಂಗಾರವಾದ ಗೋವಿಂದ-ಚೆಲುವ । ಪೊಂಗೊಳಲೂದುವ ಚೆಂದ ಅಂಗನೆಯರ ಒಲುಮೆಯಿಂದ-ನಮ್ಮ | ಮಂಗಳಮೂರತಿಯ ಮೋರೆ ಬಾಡಿತಯ್ಯ ಆಕಳೊಡನೆ ಹರಿದಾಡಿ-ನಮ್ಮ | ಶ್ರೀಕಾಂತ ಗೆಳೆಯರ ಕೂಡಿ | ಲೋಕವ ಈರಡಿ ಮಾಡಿ-ನಮ್ಮ | ಸಾಕುವ ಪಾದವು ಬಳಲಿದುವಯ್ಯ ಸದಮಲ ಯೋಗಿಗಳೆಲ್ಲ-ನಿನ್ನ | ಪದವ ಬಣ್ಣಿಸುತಿಪ್ಪರೆಲ್ಲ | ಯದುಕುಲ ಚೌಪಟ ಮಲ್ಲ-ಹಾಲ | ಹದನು ಮೀರಿತಯ್ಯ ಪುರಂದರವಿಠಲ