ಏನಾಯಿತು ರಂಗಗೆ ನೋಡಿರಮ್ಮ-ನಿ-|
ಧಾನಿಸಿ ಎನಗೊಂದು ಪೇಳಿರಮ್ಮ
ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |
ಎಷ್ಟಾದರೂ ಮೊಲೆಯುಣ್ಣನಮ್ಮ ||
ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |
ಎಷ್ಟು ಹೇಳಲಿ ಬಾಯ ಮುಚ್ಚನಮ್ಮ
ಕಾಯ ಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ ।
ತಾಯಿಯ ಒಲವಿಲ್ಲದಾಯಿತಮ್ಮ ॥
ನೋಯೆ ನೋಟಕೆ ಅಬ್ಧಿ ಬತ್ತಿತಮ್ಮ-ಅವನ ।
ಬಾಯಿಯೊಳಗೆ ವಿಶ್ವ ತೋರಿತಮ್ಮ
ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ ।
ಸತ್ಯವು ಕುದುರೆಯನೇರುವನಮ್ಮ ||
ನಿತ್ಯ ನಿರ್ದೋಷ ಪುರಂದರವಿಠಲ ತನ್ನ-|
ಭಕ್ತರ ಸಲಹುವ ದೇವನಮ್ಮ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ