ಕೀರ್ತನೆ - 63     
 
ಆರೇ ರಂಗನ ಆರೇ ಕೃಷ್ಣನ । ಆರೇ ರಂಗನ ಕರೆಯಬಂದವರು ಗೋಪಾಲಕೃಷ್ಣನ ಪಾಪವಿನಾಶನ । ಈ ಪರಿಯಿಂದಲಿ ಕರೆಯ ಬಂದವರು ವೇಣುವಿನೋದನ ಪ್ರಾಣಪ್ರಿಯನ | ಜಾಣೆಯರರಸನ ಕರೆಯ ಬಂದವರು ಕರಿರಾಜವರದನ ಪರಮಪುರುಷನ । ಪುರಂದರವಿಠಲನ ಕರೆಯ ಬಂದವರು