ಆಡ ಹೋದಲ್ಲಿ ಮಕ್ಕಳು-ಎನ್ನನು-1
ಅಡಿಕೊಂಬರು ನೋಡಮ್ಮ
ನೋಡಿ ನೋಡಿ ಇತ್ತ ಮುಖವ।
ಮಾಡಿ ಕಣ್ಣ ಮೀಟುವರಮ್ಮ
ದೇವಕಿ ಪೆತ್ತಳಂತೆ-ವಸು-1
ದೇವನೆಂಬವ ಪಿತನಂತೆ ||
ಕಾವಲಿನೊಳು ಪುಟ್ಟಿದನಂತೆ |
ಮಾವ ಕಂಸಗಂಜಿ ಬಂದೆನಂತೆ
ನೀನೆನ್ನ ಪೆತ್ತಿಲ್ಲವಂತೆ-ಅಮ್ಮಾ |
ನಾನಿನ್ನ ಮಗನಲ್ಲವಂತೆ ||
ಧೇನು ಕಾಯುವರಿಲ್ಲವೆಂದು ನೀನು |
ಸಾನುರಾಗದಿ ಸಲಹಿದೆಯಂತೆ
ವಿಷವು ತುಂಬಿದ ಮೊಲೆಯ-ಕೊಟ್ಟ |
ಅಸುರೆಯ ಸಂಹರಿಸಿದೆನಂತೆ |
ಅಸುರನಾದ ಶಕಟನನಾಕ್ಷಣದಲಿ |
ಶಿಶುವಾಗಲೆ ಒರೆಸಿದೆನಂತೆ
ವತ್ಸಾಸುರನನು ಕೆಡಹಿದೆನಂತೆ
ಕಿಚ್ಚನೆಲ್ಲವನು ನುಂಗಿದೆನಂತೆ ||
ಕಚ್ಚಬಂದ ಕಾಳಿಂಗನಾ ಹೆಡೆ-I
ಚಚ್ಚಿ ತುಳಿದು ಓಡಿದೆನಂತೆ
ಕುಸುಮಗಂಧಿಯರುಡುವ |
ವಸನ ಕದ್ದು ಓಡಿದೆನಂತೆ ॥
ಹಸುಗೂಸು ಅಲ್ಲ ಇವ ।
ಅಸುರ ಮಗನು ಎಂತೆಂಬುವರೆ
ಒರಳನೆಳೆತಂದು ಮತ್ತಿ-I
ಮರವ ಮುರಿದೋಡಿದೆನಂತೆ ||
ತರಳೆಯರ ವಸ್ತ್ರವ ಕದ್ದು |
ತರುವನೇರಿದೆನಂತೆ
ಪರಮ ಗಾಡಿಕಾರನಿವ ।
ಪುರಂದರ ವಿಠಲರಾಯ |
ತರುಣಿಯರ ವಂಚಿಸುತ್ತ |
ಠಕ್ಕಿಸಿ ಪೋದನೆಂತೆಂಬುವರು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ