ಆಡ ಹೋಗೋಣ ಬಾರೊ ರಂಗ |
ಓಡಿ ಹೋಗಲು ಬೇಡೊ ಕೃಷ್ಣ
ಅಣ್ಣೆಕಲ್ಲು ಗೋಲಿ ಗಜುಗ |
ಚಿಣ್ಣಿಕೋಲು ಚೆಂಡು ಬುಗುರಿ |
ಕಣ್ಣು ಮುಚ್ಚಾಲೆ ಹಲವು ಕೂಟ ।
ಬಣ್ಣದಾಟಗಳನೆಲ್ಲ
ಸೋಲು-ಗೆಲುವಿಗೆಲ್ಲ ನೀನು |
ಬಾಲಕರೊಳು ಕೂಡಿಕೊಂಡು ||
ಮೇಲೆ ಮಮತೆಯಿಂದೆ ಸಾನು-|
ಕೂಲವಾಗಿ ನಡೆಸುವಂತೆ
ಪುಟ್ಟ ಪುಟ್ಟ ಕೊಳಲು ಕಂಬಳಿ |
ಕಟ್ಟಿ ಬುತ್ತಿ ಕೈಯಲಿ ಕೋಲು ॥
ದಿಟ್ಟ ಚೆಲುವನಾದ ಪುರಂದರ-1
ವಿಠಲ ಗೋವಳರ ರಾಯ