ಆಡ ಹೋಗಲು ಬೇಡವೊ-ರಂಗಯ್ಯ |
ಬೇಡಿಕೊಂಬೆನು ನಿನ್ನನು
ಆಡ ಹೋಗಲುಬೇಡ ಗಾಡಿಕಾರ್ತಿಯರೊಳು |
ಕೂಡಿ ಕೆಡಲು ಬೇಡವೊ–ರಂಗಯ್ಯ
ನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |
ಭಾರವ ಹೊರು ಎಂಬರೊ |
ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |
ಹಾರವ ಹಾಕೆಂಬರೊ-ರಂಗಯ್ಯ
ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |
ಕೊಡಲಿಯ ಪಿಡಿಯೆಂಬರೊ ||
ಕಿಡಿಗಣ್ಣ ರುದ್ರನ ವರದ ದಶಕಂಠನ |
ಮಡುಹಿ ನೀ ಬಾರೆಂಬರೊ-ರಂಗಯ್ಯ
ಬೆಟ್ಟವನೆತ್ತೆಂಬರೊ-ನಿನ್ನನು ಬರಿ-1
ಬಟ್ಟಾಗಿ ತಿರುಗೆಂಬರೊ ||
ಪುಟ್ಟ ತೇಜಿಯನೇರಿ ನಲಿನಲಿದಾಡುತ ।
ದಿಟ್ಟ ಪುರಂದರವಿಠಲ-ರಂಗಯ್ಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ