ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |
ಮಂಗಳನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲಹರಿ ಭೈರವ ಸಾರಂಗ ದೇಶಿ ।
ಗುಂಡಕ್ರಿ ಗುಜ್ಜರಿ ಕಲ್ಯಾಣಿ ರಾಗದಿ ॥
ತಂಡತಂಡದಿ ನೆರೆದು ರಂಗನ ಉಡಿಗಂಟೆ ।
ಢಂ ಢಣ ಢಣಿರೆಂದು ಹಿಡಿದು ಕುಣಿಸುವರು
ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |
ಉತ್ತಮ ಶಂಖದ ನಾದಗಳಿಂದ ||
ಸುತ್ತಮುತ್ತಿ ನಾರಿಯರು ತಾಥೈಯೆಂದು ।
ಅರ್ತಿಯಿಂದ ಕುಣಿಸುವರು ಪರವಸ್ತು ತತ್ಥೈಹಿಡಿದು
ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ ।
ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||
ಕಾಮಿತ ಫಲವೀವ ಭಕುತಜನರೊಡೆಯ |
ಸ್ವಾಮಿ ಶ್ರೀ ಪುರಂದರವಿಠಲರಾಯನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ