ಕೀರ್ತನೆ - 54     
 
ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರ ಚಿನ್ಮಯ ರೂಪಂ ಅಂಬುಜಭವವಿನುತಂ ಅಗಣಿತ ಗುಣನಾಮಂ ತುಂಬುರು ನಾರದ ಗಾನವಿನೋದಂ ಅಂಬುಧಿಶಯನಂ ಅಗಣಿತನಾಮಂ ಪಾಹಿ ಪಾಂಡವಪಾಲಂ ಕೌರವ ಹರಣಂ ಬಾಹು ಪರಾಕ್ರಮ ಫಣಿಪತಿ ಶಯನಂ ಅಹಲ್ಯಾಶಾಪವಿಮೋಚನಚರಣಂ ಸಕಲವೇದವಿಚಾರಂ ಸರ್ವಜೀವಿ ನೇತಾರಂ ಮಕರಕುಂಡಲಧರ ಮದನಗೋಪಾಲಂ ಭಕ್ತವಿಪೋಷಣ ಪುರಂದರವಿಠಲಂ