ವೆಂಕಟರಮಣ ವೇದಾಂತ ನಿನ್ನಯ ಪಾದ
ಪಂಕಜ ಕಂಡ ಮೇಲೆ- ಇಂಥ
ಮಂಕುಜನರ ಬೇಡಿಸುವುದುಚಿತವೇ
ಶಂಖಚಕ್ರಾಂಕಿತನೇ
ಕ್ಷೀರಸಾಗರ ಮಥನಿಸಿ ಪೊಂದಿದಾತಗೆ
ನೀರು ಮಜ್ಜಿಗೆ ಕಡವೆ ||
ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತಂಗೆ
ದೋರೆ ತಿಂತ್ರಿಣಿ ಬಯಕೆ?
ಸಾರ್ವಭೂಪಾಲನ ಸೂನುವೆನಿಸಿಕೊಂಡು
ಸೋರೆ ಕೂಳಿನ ತಿರುಕೆ ॥
ನಾರಿ ಲಕ್ಷ್ಮೀಕಾಂತ ನಿನ್ನ ನಂಬಿದವಗೆ
ದಾರಿದ್ರ್ಯದಂಜಿಕೆಯೆ?
ಸುರನದಿಯಲಿ ಮಿಂದು ಶುಚಿಯಾದ ಬಳಿಕಿನ್ನು
ತೀರ್ಥದ ಅಟ್ಟುಳಿಯೇ ॥
ಕರುಣಾನಿಧಿಯೆಂದು ಮೊರೆಹೊಕ್ಕ ದಾಸಗೆ
ದುರಿತದ ದುಷ್ಫಲವೆ?
ಗರುಡನ ಮಂತ್ರವ ಕಲಿತು ಜಪಿಸುವಂಗೆ
ಉರಗನ ಹಾವಳಿಯೆ ॥
ಹರಿಯ ಪಕ್ಕದೊಳು ಮನೆ ಕಟ್ಟಿದಾತಂಗೆ
ಕರಿಗಳ ಭೀತಿಯುಂಟೆ?
ಪರಮಪುರುಷ ಸುಗುಣಾತ್ಮಕ ನೀನೆಂದು
ಮರೆಹೊಕ್ಕೆ ಕಾಯೊ ಎನ್ನ ॥
ಉರಗಾದ್ರಿವಾಸ ಶ್ರೀ ಪುರಂದರವಿಠಲನೆ
ಪರಬ್ರಹ್ಮ ನಾರಾಯಣ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ವೆಂಕಟರಮಣನ ಸ್ತುತಿ