ಕೀರ್ತನೆ - 51     
 
ಬಾರಯ್ಯ ವೆಂಕಟರಮಣ ಬಾರಯ್ಯ ವೆಂಕಟರಮಣನೆ ನೀನೆನಗೆ ಧಾರಿಣಿಯೊಳು ನಿನ್ನ ಮೂರುತಿ ತೋರುತ ಮನವೆಂಬ ಮಂಟಪ ನಿನಗೆ ಹಾಕಿ ಎನ್ನ ತನುವನೊಪ್ಪಿಸಿ ಕೈಯ ಮುಗಿವೆನಯ್ಯ ॥ ವನಜಜ ಭವ ಸುರಮುನಿಗಳು ಭಜಿಸುವ ಘನ ಮಹಿಮನೆ ಪಾದಕೆರಗಲೆನ್ನ ಶಿರ ಲಿಂಗದೇಹವೆಂಬ ಪವಳಿ ಶೃಂಗರಿಸಿ ಅಂಗವ ನಿನಗೆ ಕಾಣಿಕೆಯ ನೀಡುವೆ ॥ ಮಂಗಳಮೂರುತಿ ಅಂಗನೆ ಸಹಿತ- ಭು ಜಂಗಶಯನ ಎನ್ನ ಕಂಗಳುತವವೀಯೋ ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವ ಉಡುಗೆ ಪೀತಾಂಬರ ಕೊರಳ ಕೌಸ್ತುಭ | ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದ ಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ ಒಡೆಯ ನೀನೆನಗೆ ಅನಾದಿ ಕಾಲದಿಂದ ಬಡವನು ನಾ ನಿನ್ನ ದಾಸನಯ್ಯ || ಕಡುಕರುಣದಿಂದ ದಾಸತ್ವ ನೀಡು ಗ- ರುಡಗಮನನೆ ವೆಂಕಟೇಶ ಎನ್ನ ಮನಕೆ ಬರಿಮನೆಯಲ್ಲವು ಪರಿವಾರವು ಉಂಟು ಪರಮಪುರುಷ ನಿನ್ನ ರೂಪಗಳುಂಟು || ಸಿರಿದೇವಿ ಸಹಿತದಿ ಪುರಂದರ ವಿಠಲನೆ ಕರುಣದಿಂದಲಿ ಮನ್ಮಂದಿರದೊಳಗೆ