ಬಂದು ನಿಂದಿಹ ನೋಡಿ- ಭೂತಳದಿ ವೆಂಕಟ
ಇಂದಿರೆಯನೊಡಗೂಡಿ- ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ- ಆನಂದ ಬೇಡಿ
ವಂದಿಸುತ ಮನದೊಳಗೆ ಇವನಡಿ-
ದ್ವಂದ್ವ ಭಜಿಸಲು ಬಂದ ಭಯಹರ |
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ (ಅ.ಪ)
ದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-
ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪ
ಹಾರ ಹೊಂದಿಹುದಲ್ಲಿ ವಿಸ್ತಾರದಲ್ಲಿ ||
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲ-
ಧಾರಿ ಭುಜ ಕೇಯೂರ ಭೂಷಿತ
ಮಾರಪಿತ ಗುಣ ಮೋಹನಾಂಗ ||
ಚಾರು ಪೀತಾಂಬರ ಕಟಿಯ ಕರ-
ವೀರ ಕಲ್ಹಾರಾದಿ ಹೂವಿನ
ಹಾರ ಕೊರಳೊಳು ಎಸೆಯುತಿರೆ ವದ-1
ನಾರವಿಂದವು ನಗುತ ನಲಿಯುತ
ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-
ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದು
ರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||
ಚೆಲ್ವ ಪಣೆಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ-
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾ೦ತಕ ॥
ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂ
ಗಲ್ಯ ಹೃಯಯವ ಮಾಡಿ ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚೆಂದದಿಂದಲಿ
ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರ
ಸುದರ್ಶನ-ದರಧಾರ-ಸುಂದರ ಮನೋಹರ
ಪದಯುಗದಿ ನೂಪುರ-ಇಟ್ಟಿಹನು ಸನ್ಮುನಿ
ಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||
ವಿಧಿ-ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯವು ವಿರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶಪೂಜೀತ ತ್ತಿಭುವನೇಶ ||
ಸದುನಲಾಸದಿ ಸ್ವಾಮಿ ತೀರ್ಥದಿ
ಉದುಸುತಿರೆ ಸಿರಿ ಮಹಿಳೆ ಸಹಿತದಿ
ಪದುಮನಾಭ ಪುರಂದರ ವಿಠಲನು
ಮುದದಿ ಬ್ರಹ್ಮೋತ್ಸವದಿ ಮೆರೆಯುತ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ವೆಂಕಟರಮಣನ ಸ್ತುತಿ