ಕೀರ್ತನೆ - 45     
 
ಹೂವ ತರುವರ ಮನೆಗೆ ಹುಲ್ಲ ತರುವ | ಅವ್ವ ಲಕುಮಿಯ ರಮಣ ಅವಗಿಲ್ಲ ಗರುವ ಒಂದು ದಳ ಶ್ರೀ ತುಳಸಿ ಗಂಧ-ಪುಷ್ಪವ ತಂದು | ಇಂದಿರಾಕಾಂತನಿಗೆ ಅರ್ಪಿಸಿರಲು || ಬಂಧಗಳ ಪರಿಹರಿಸಿ ಸಿಂಧುಶಯನನು ತನ್ನ | ಮಂದಿರದೊಳಿರಿಸಿ ಆನಂದವುಣಿಸುವನು ಪರಿಪರಿಯ ಪೂಜೆಗಳ ಕರಿವರದಗರ್ಪಿಸಲು | ಪರಿಪೂರ್ಣ ತಾನವನ ಕರವ ಪಿಡಿದು || ಸರಿಸಿಜಾಕ್ಷನು ತ್ವರದಿ ಸಾರೂಪ್ಯವನ್ನಿತ್ತು | ಮರುತನಂತರ್ಗತನು ಹರುಷದಲಿ ಪೊರೆವ ತೊಂಡರಾ ಮನೆಗಳಲಿ [ತೊಂಡು ಗೆಲಸವ ಗೈವ] । ಪಾಂಡವರ ಮನೆಯಲ್ಲಿ ಕುದುರೆಗಳ ತೊಳೆದ || ಅಂಡಜಾಸನ ನಮ್ಮ ಪುರಂದರ ವಿಠಲನು | ತೊಂಡರಿಗೆ ತೊಂಡನಾದ ಹಿಂಡು ದೈವದ ಗಂಡ