ಕೀರ್ತನೆ - 44     
 
ಹರಿನಾರಾಯಣ ಹರಿನಾರಾಯಣ | ಹರಿನಾರಾಯಣ ನೆನು ಮನವೆ ನಾರಾಯಣನೆಂಬ ನಾಮದ ಬೀಜವ । ನಾರದ ಬಿತ್ತಿದ ಧರೆಯೊಳಗೆ ತರಳಧ್ರುವನಿಂದಲಿ ಅಂಕುರಿಸಿತು ಅದು | ವರಪ್ರಹ್ಲಾದನಿಂದ ಮೊಳಕೆಯಾಯ್ತು ॥ ಧರಣೀಶ ರುಕ್ಮಾಂಗದನಿಂದ ಚಿಗುರಿತು । ಕುರು ಪಿತಾಮಹನಿಂದ ಹೂವಾಯ್ತು ವಿಜಯನ ಸತಿಯಿಂದ ಫಲವಾಯ್ತು-ಅದು । ಗಜೇಂದ್ರನಿಂದ ದೋರೆ ಹಣ್ಣಾಯ್ತು || ದ್ವಿಜ ಶುಕಮುನಿಯಿಂದ ಫಲ ಪಕ್ವವಾಯಿತು । ಅಜಾಮಿಳ ತಾನುಂಡು ರಸ ಸವಿದ ಕಾಮಿತ ಫಲವೀವ ನಾಮವೊಂದಿರಲಾಗಿ | ಹೋಮ ನೇಮ ಜಪತಪವೇಕೆ ॥ ಸ್ವಾಮಿ ಶ್ರೀ ಪುರಂದರವಿಠಲ ರಾಯನ | ನೇಮದಿಂದಲಿ ನೀ ನೆನೆ ಮನವೆ