ಕೀರ್ತನೆ - 41     
 
ನೀನೆ ಬಲ್ಲಿದನೊ - ಹರಿ ನಿನ್ನ - 1 ದಾಸರೆ ಬಲ್ಲಿದರೊ ನಾನಾ ತರದಿ ನಿಧಾನಿಸಿ ನೋಡಲು ನೀನೆ ಭಕ್ತಾಧೀನನಾದ ಮೇಲೆ ಜಲಜಭವಾಂಡದ ಒಡೆಯನೆಂದೆನಿಸಲು | ಬಲುಬಲು ದೊಡ್ಡವನಹುದಹುದಾದಡೆ | ಅಲಸದೆ ಹಗಲಿರುಳೆನ್ನದೆ ಅನುದಿನ | ಬಲಿಯ ಮನೆಯ ಬಾಗಿಲ ಕಾಯ್ದಮೇಲೆ ಖ್ಯಾತಿಯಿಂದ ಪುರುಹೂತ ಸಹಿತ ಸುರ । ವ್ರಾತವು ನಿನ್ನನು ಒತ್ತಿ ಓಲೈಸಲು || ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ 1 ಪಾರ್ಥನ ರಥಕೆ ಸೂತನಾದ ಮೇಲೆ ಪರಮಪುರುಷ ಪರಬೊಮ್ಮ ನೀನೆನುತಲಿ | ನಿರುತದಿ ಶ್ರುತಿಯು ಕೊಂಡಾಡುತಿರೆ ॥ ವರಪಾಂಡವರರಮನೆಯೊಳು ಊಳಿಗ । ಕರೆಕರೆದಲ್ಲಿಗೆ ಪೋದಪೋದ ಮೇಲೆ ಧುರದಲಿ ಪಣೆಯನೊಡೆದ ಭೀಷ್ಮನ ಸಂ- 1 ಹರಿಪೆನೆನುತ ಚಕ್ರವ ಪಿಡಿಯೆ | ಹರಿ ನಿನ್ನ ಕರುಣದ ಜೋಡು ತೊಟ್ಟಿರಲವ - 1 ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ ತರಳನು ಕರೆಯಲು ಭರದಿ ಕಂಬದಿ ಬಂದು 1 ನರಮೃಗರೂಪ ಭಕ್ತರ ತೆತ್ತಿಗನೆ ॥ ವರದ ಪುರಂದರವಿಠಲರಾಯ ನಿನ್ನ | ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ