ಕೀರ್ತನೆ - 40     
 
ನಿನ್ನ ನಾನೇನೆಂದೆನೋ – ರಂಗಯ್ಯ ರಂಗ ನಿನ್ನ ನಾನೇನೆಂದೆನೊ ನಿನ್ನ ನಾನೇನೆಂದೆ ಚಿನ್ಮಯ ಮೂರುತಿ ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ಧೀರಸೋಮಕ ವೇದಚೋರನ ಮಡುಹಿದೆ ವಾರಿಧಿಗಿಳಿದ ಪರ್ವತವ ಮೊತ್ತೆ ಧಾರಿಣಿಯನು ತಂದು ದನುಜದಲ್ಲಣನಾದೆ ನಾರಸಿಂಹ ನಿನಗೆ ನಮೊ ಎಂದೆನಲ್ಲದೆ ನೀರ ಪೊಕ್ಕವನೆಂದೆನೆ - ಬೆನ್ನಿನ ಮೇಲೆ ಭಾರ ತಾಳ್ದವನೆಂದೆನೆ ಮದ್ಲಿನಗಿದು ಬೇರ ಮೆದ್ದವನೆಂದೆನೆ - ರಕ್ಕಸರೊಳು ಹೋರಾಡಿದವನೆಂದು ಹೊಗಳಿದೆನಲ್ಲದೆ ಧರೆಯದಾನವ ಬೇಡಿ ನೆಲವ ಮೂರಡಿ ಮಾಡಿ ಪರಶುವಿಡಿದು ಕ್ಷತ್ರಿಯರ ಸವರಿ ಚರಣದಿ ಪಾಷಾಣ ಹೆಣ್ಣು ಮಾಡಿದ ಪುಣ್ಯ ಚರಿತ ಯಾದವ ಪತಿ ಶರಣೆಂದೆನಲ್ಲದೆ ತಿರುಕ ಹಾರುವನೆಂದೆನೆ - ಹೆತ್ತ ತಾಯ ಶಿರಕೆ ಮುನಿವನೆಂದೆನೆ ವನ ದೇಶದಿ ಧುರಕೆ ನಿಂದವನೆಂದೆನೆ - ಪೂತನಿಯ ಮೊಲೆಯ ಹರಿದು ಕೊಂದವನೆಂದು ಸ್ತುತಿಸಿದೆನಲ್ಲದೆ ಚಿತ್ತಜ ಕೋಟಿಲಾವಣ್ಯ ಮುಪ್ಪುರದೊಳು ಉತ್ತಮ ಸ್ತ್ರೀಯರ ವ್ರತವಳಿದೆ ಮತ್ತೆ ಕಲ್ಕಿಯಾದೆ ಮಲೆತರ ಮಡುಹಿದೆ ಉತ್ತಮ ಶ್ರೀರಾಮನೆಂದು ಸ್ತುತಿಸಿದೆನಲ್ಲದೆ ಬತ್ತಲೆನಿಂತವನೆಂದೆನೆ ತೇಜಿಯನೇರಿ ಒತ್ತಿಬಾಹವನೆಂದೆನೆ ಬಾರಿಬಾರಿಗೆ ಸತ್ತುಹುಟ್ಟುವನೆಂದೆನೆ ಪುರಂದರ ವಿಠಲ ಹತ್ತವತಾರದ ಹರಿಯೆಂದೆನಲ್ಲದೆ