ಕೀರ್ತನೆ - 38     
 
ನಾರಾಯಣ ತೇ ನಮೋ ನಮೋ | ನಾರದಸನ್ನುತ ನಮೋ ನಮೋ ಮುರಹರ ನಗಧರ ಮುಕುಂದ ಮಾಧವ । ಗರುಡಗಮನ ಪಂಕಜನಾಭ ॥ ಪರಮಪುರುಷ ಭವಭಂಜನ ಕೇಶವ | ನರಮೃಗ ಶರೀರ ನಮೋ ನಮೋ ಜಲಧಿಶಯನ ರವಿಚಂದ್ರ ವಿಲೋಚನ | ಜಲರುಹಭವನುತ ಚರಣಯುಗ ॥ ಬಲಿಬಂಧನ ಗೋವರ್ಧನಧಾರಿ | ನಳಿನೋದರ ತೇ ನಮೋ ನಮೋ ಆದಿದೇವ ಸಕಲಾಗಮ ಪೂಜಿತ | ಯಾದವಕುಲ ಮೋಹನರೂಪ ।। ವೇದೋದ್ಧರ ಶ್ರೀವೆಂಕಟನಾಯಕ । ಮೋದದ ಪುರಂದರ ವಿಠಲ ನಮೋ ನಮೋ