ಇನ್ನೇಕೆ ಯಮನ ಬಾಧೆಗಳು? |
ಎನ್ನ ಜಿಹ್ವೆಯೊಳಗೆ ಹರಿನಾಮವಿರಲು
ಪತಿತ ಪಾವನನೆಂಬ ನಾಮ-ಸಕಲ |
ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ॥
ಕ್ರುತುಕೋಟಿ ಒಂದೇ ನಾಮ-ಸದ್ |
ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ
ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |
ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ॥
ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ ।
ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ
ಹದಿನಾಲ್ಕು ಲೋಕವಾಳುವ – ನಮ್ಮ |
ಮದನ ಜನಕನಾಗಿ ಮಹಿಮೆ ತೋರುವ ॥
ಪದುಮನಾಭನಾಗಿ ಮೆರೆವ- ನಮ್ಮ |
ಪುರಂದರವಿಠಲನ ಹರುಷದಿ ಕರೆವ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಪುರಾಣ ಮೂಲದ ಹರಿ ಸ್ತುತಿ