ಕೀರ್ತನೆ - 33     
 
ಅಕೊ ಹಾಗಿಹನೆ ಇಕೊ ಹೀಗಿಹನೆ ಕಾಲಿಲ್ಲದೆ ನಡೆಸುವ ಕೈಯಿಲ್ಲದೆ ಹಿಡಿಸುವ ಹಲ್ಲಿಲ್ಲದೆ ತಿನ್ನಿಸುವ ಹೊಟ್ಟೆಯಿಲ್ಲದೆ ಉಣಿಸುವ ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವ ಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ ಶ್ವೇತ ದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿ ನಿತ್ಯ ವೈಕುಂಠ ವಾಸ ಪುರಂದರವಿಠಲ