ಕೀರ್ತನೆ - 29     
 
ಹರಿಯೆ........................................................ ಹರಿ ನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು ! ಹರಿ ನಿನ್ನ ಕರುಣವೇ ರವಿಯ ಬಲವು || ಹರಿ ನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು । ಹರಿ ನಿನ್ನ ಮೋಹವೇ ಶನಿಯ ಬಲವು ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ | ಮಂಗಳನ ಬಲವು ಎನ್ನಂಗಕೀಗ || ರಂಗಯ್ಯ ನಿನ್ನ ಚರಣಾರವಿಂದವ ನೋಡೆ | ಹಿಂಗಿ ಪೋಪುದು ಅಘವು ಸೌಮ್ಯಬಲವು ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ । ಅದಿಮೂಲನೆ ನಿನ್ನ ಗುಣ ಕಥನವ ॥ ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ | ಆದಿಮೂರುತಿ ಬ್ರಹ್ಮ ಪುರಂದರ ವಿಠಲ