ಹರಿನಾಮಕೀರ್ತನೆ ಅನುದಿನ ಮಾಳ್ಪಗೆ |
ನರಕ ಭಯಗಳುಂಟೆ?
ಕೇಸರಿಗಂಜದ ಮೃಗವುಂಟೆ?-ದಿ-।
ನೇಶನಿಗಂಜದ ತನುವುಂಟೆ? ॥
ವಾಸುದೇವ ವೈಕುಂಠ ಜಗನ್ಮಯ ।
ಕೇಶವ ಕೃಷ್ಣ ನೀನೆಂದುಚ್ಚರಿಸುವ
ಕುಲಿಶವನೆದುರಿಪ ಗಿರಿಯುಂಟೆ?-ಬಲು |
ಪ್ರಳಯ ಬಂದಾಗ ಜೀವಿಪರುಂಟೆ?
ಜಲಜನಾಭ ಗೋವಿಂದ ಜನಾರ್ದನ |
ಕಲುಷ ಹರಣ ಕರಿರಾಜ ರಕ್ಷಕನೆಂಬ
ಗರುಡಗೆ ಅಂಜದ ಫಣಿಯುಂಟೆ? -ದ-|
ಳ್ಳುರಿಯಲಿ ಬೇಯದ ತೃಣವುಂಟೆ? ।|
ನರಹರಿನಾರಾಯಣ ಕೃಷ್ಣ ಕೇಶವ ।
ಪುರಂದರ ವಿಠಲ ನೀನೆಂದುಚ್ಚರಿಸುವ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ