ಸಕಲ ಗ್ರಹಬಲ ನೀನೆ ಸರಸಿಜಾಕ್ಷ |
ನಿಖಿಳವೇತಕೆ ಎನಗೆ ವಿಶ್ವವ್ಯಾಪಕ ಮೋಹಿ
ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರುವು ಶನಿಯು ಮಂಗಳನು ನೀನೆ ||
ದಿವಸ ರಾತ್ರಿಯು ನೀನೆ ನವವಿಧಾನವು ನೀನೆ
ಭವರೋಗಹರ ನೀನೆ ರಕ್ಷಕನು ನೀನೆ
ಪಕ್ಷಮಾಸವು ನೀನೆ ಪರ್ವಕಾಲವು ನೀನೆ
ನಕ್ಷತ್ರಯೋಗ ಕರಣಗಳು ನೀನೆ ॥
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನ ರಕ್ಷಕನು ನೀನೆ
ಋತು ಕಾಲಗಳು ನೀನೆ ವ್ರತದಿನಂಗಳು ನೀನೆ
ಕ್ರತುವು ಸಂಧ್ಯಾನ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಶ್ರುತಿಗೆ ನಿಲುಕದ ಮಹಾತ್ಮನು ಹರಿಯು ನೀನೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ