ಕೀರ್ತನೆ - 25     
 
ವಿಧಿ ನಿಷೇಧವು ನಿನ್ನವರಿಗೆಂತೊ ಹರಿಯೇ ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ಮತಿಯೆಂಬ ವಿಧಿಯನೊಂದನೆ ಬಲ್ಲರಲ್ಲದೇ ಮತ್ತೊಂದು ಮಿಂದದ್ದೆ ಗಂಗಾದಿ ಪುಣ್ಯತೀರ್ಥಂಗಳು ಬಂದದ್ದೆ ಪುಣ್ಯಕಾಲ ಸಾಧುಜನರು || ನಿಂದದ್ದೆ ಗಯೆ ವಾರಣಾಸಿ ಕುರುಕ್ಷೇತ್ರ ಸಂದೇಹವೇಕೆ ಮದದಾನೆ ಪೋದುದೆ ಬೀದಿ ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂ ಮಂಡಲದಿ ಶಯನವೆ ನಮಸ್ಕಾರವು ।। ತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆ ಮಂಡೆ ಬಾಗಿಸಿ ನಮಿಪ ಭಾಗವತ ಜನಕೆ ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯು ನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರ | ಕೊಡುವುದೆಲ್ಲವು ಅಗ್ನಿಮುಖದಲ್ಲಿ ಆಹುತಿ ದೃಢಭಕ್ತರೇನ ಮಾಡಿದರದೇ ಮರ್ಯಾದೆ ನಷ್ಟವಾದುದು ಎಲ್ಲ ಸಂಚಿತದ ಕರ್ಮವು ಮುಟ್ಟಲಂಜುವುವೆಲ್ಲ ಆಗಾಮಿಕರ್ಮ ॥ ಸ್ಪಷ್ಟವಾಗಿರುವ ಪ್ರಾರಬ್ಧ ಕರ್ಮವ ಮೀರಿ ಸೆಟ್ಟಿಮೆಟ್ಟಿದ್ದೆ ಪಟ್ಟಣವೆಂಬುದೇ ನಿಜವು ಎಲ್ಲಿ ಕುಳ್ಳಿರಲಲ್ಲಿ ಪ್ರಾಯೋಪವೇಶ ಮ ತೆಲ್ಲಿ ನೋಡಲು ಮನವು ಅಲ್ಲಿಯೆ ಸಮಾಧಿ || ಎಲ್ಲೆಲ್ಲಿಯೂ ಪುರಂದರವಿಠಲ ರಾಯನ ಬಲ್ಲವರಿಗೆಲ್ಲಿಹುದು ಪಾಪ ಪುಣ್ಯದ ಲೇಪ