ಕೀರ್ತನೆ - 24     
 
ರಾಮ ನಾಮಾಮೃತವ ಕೊಂಬವರೆಲ್ಲ ! ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಒಮ್ಮನವೆರಸಿ ಬನ್ನಿ । ನಿಮ್ಮ ಮನಕೆ ಬಂದಂತಳೆದು ಕೊಳ್ಳಿ | ರಾಮಟಂಕೆಯ ಸಲಿಸಿ ಶ್ರೀ ಕೃಷ್ಣನೆಂಬ | ಧರ್ಮದ ಸಂತೆ ನೆರೆದಿದೆ ಬನ್ನಿ ಉಂಟು ನಾಲ್ಕು ಕುದುರೆಗಳು | ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು || ಸಾಲವರ್ಣದ ಪಟ್ಟಿಯು ಏಳಿರೆ | ಏಳುಲೋಕವು ಬಲ್ಲದು ಬೆಲೆಯಿಲ್ಲದ ಮುತ್ತುಂಟು | ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು || ಥಳಥಳಿಸುವ ನೀಲಿಯ ಕೊಂಬುವರೆಲ್ಲ | ನಳಿನನಾಭನ ಸನ್ನಿಧಿಗೆ ಬನ್ನಿ ಎರಡು ಕಾಶಿಯಲಳೆವ ಕೊಳಗವು | ಪಿರಿದುವೊಂದು ಕಿರಿದೊಂದು ಉಂಟಲ್ಲಿಗೆ || ಗರಳವವೊರಿಸಲು ರತ್ನವು । ಮರುತಾಶ್ರಯನ ಸನ್ನಿಧಿಗೆ ಆರಂಗಡಿಯ ಸುಟ್ಟು | ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು || ಸಾರಿಸಿ ನವವಿಧ ಶುಚಿಯ ಹೇಳಿದ | ಸರ್ವಾತ್ಮಗೆ ಸೌದೆಯ ಸುಂಕಿಗರೈವರಿಗೆ ಹರುಷದಿಂದ । ಪಂಕಜನಾಭನ ಚೀಲ ತೋರಿ || ಶಂಕೆಯಿಲ್ಲದೆ ನಡೆವ ಅವರನೆಲ್ಲ | ವಂಚಿಸಿ ಎದೆಯ ಟೊಣೆದು ಹೋಗುವಾ ಇಂದೊಂದು ಸರಶಿಗೆ ಬಹಳ ಲಾಭ | ತಾ ತಂದು ಕುಳಿತುಂಬುದಕೆ ಉಂಟು ॥ ತಂದೆ ಪುರಂದರವಿಠಲ ರಾಯ । ಗಂಧವಾಯಿತು ಬೇಹಾರವು