ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ |
ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ
ಒಮ್ಮನ ಗೋದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ ।
ಸುಮ್ಮನ ಸಜ್ಜಿಗೆ ತೆಗೆದು । ಸಣ್ಣ ಸೇವಿಗೆ ಹೊಸೆದು
ಹೃದಯವೆಂಬ ಪಾತ್ರೆಯೊಳಗೆ । ಮನವೆಂಬ ಎಸರನಿಟ್ಟು |
ಬುದ್ಧಿಯಿಂದ ಪಾಕ ಮಾಡಿ | ಹರಿವಾಣ ತುಂಬಿರೋ
ಆನಂದ ಆನಂದವೆಂಬ ತೇಗು ಬಂದ ಪರಿಯಲಿ |
ಆನಂದ ಮೂರುತಿ ನಮ್ಮ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ