ಕೀರ್ತನೆ - 22     
 
ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು | ಪಾಮರರು ತಾವೇನ ಬಲ್ಲರಯ್ಯ ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿಪಾಪವನ್ನು ಮಾಯವನು ಮಾಡಿ ಮಹಾರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೊಗದಂತೆಯೆ ಕವಾಟವಾಗಿ ಚಿತ್ತ ಕಾಯಗಳ ಸುಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತ ತಾನೊಬ್ಬ ಬಲ್ಲ ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು ಸಿರಿಯರಸ ಶ್ರೀಪುರಂದರ ವಿಠಲ ರಾಮನನು ವರ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ