ಪಾವನನವ ಪಾವನನವ ಜಗಕೆ |
ದೇವ ಶ್ರೀಹರಿಯ ಪಾದವು ಸೋಕಿದರೆ
ಹರಿಯ ನೆನೆಯೆ ನಾಲಗೆ ಪಾವನ, ಸಿರಿ
ಮುದ್ರೆಯು ಭುಜಕೆ ಪಾವನ |
ಉರದಿ ನಾಭಿಗೆ ನಾಮವನಿಡೆ ಪಾವನವೊ |
ಕೊರಳೊಳು ಶ್ರೀ ತುಳಸೀಮಣಿ ನಳಿನಾಕ್ಷವು ಇರೆ ಪಾವನ |
ಪರಮ ವೈಷ್ಣವರಿಗೆರಗಿದ ಶಿರ ಪಾವನವೊ
ತುಲಸಿ ಹಿಡಿಯೆ ಕೈ ಪಾವನೆ, ದಲವನಿಡೆ ಕಿವಿ ಪಾವನ |
ಸ್ಥಲದ ಮೃತ್ತಿಕೆ ಇಡಲು ಆ ಪಣೆ ಪಾವನವೊ ॥
ಬಳಲದೆ ವೃಂದಾವನವನು ಬಳಸಿ ಬಂದವ ಪಾವನನು |
ತುಲಸಿತೀರ್ಥವ ಕೊಂಡಾತನು ಪಾವನನಯ್ಯ
ಏಕಾದಶಿಯ ವ್ರತ ಪಾವನ ಎಲ್ಲವ ತೊರೆದವ ಪಾವನ |
ನಾಕು ಜಾವದಿ ಜಾಗರವಿರೆ ಪಾವನವೊ ||
ಕಾಕು ನುಡಿಯದೆ ಕಾಮಿತಪ್ರದನೆಂಬ ಶ್ರೀಕಾಂತನ ಪಾದವ |
ಏಕಾಂತದಿ ನೆನೆವನು ಪಾವನನೊ
[ಕೃತಿರಮಣನ ಕಥೆಯನೊಪ್ಪಿ] ಕೇಳಿದ ಕಿವಿ ಪಾವನ |
ಶತವೃಂದಾರಕರ ತಲೆಯ ನೆಲೆ ಪಾವನವೊ ॥
ಮತಿ ಬೇಡಿದ ಅಜ ಪಾವನ ಯತಿ ಪಾವನ ವೈಷ್ಣವರ |
ಮತವಿಡಿದೋದಿದ ರಾಮನ ಕಥೆ ಪಾವನವೊ
ಸಾಮವೇದ ಪಾವನವು - ಭೂಮಿಪತಿ ನೀ ಪಾವನ ।
ನಾಮಧಾರಿಯು ಪಾವನ ನಾರಾಯಣನ ||
ತಾಮಸವಿಲ್ಲದೆ ಹರಿ ಸರ್ವೋತ್ತಮನೆಂಬ |
ಸೀಮೆಯು ಪಾವನ ಪುರಂದರವಿಠಲನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ