ಕೀರ್ತನೆ - 17     
 
ನಾರಿರನ್ನೆಯ ಕಂಡೆಯಾ ವಾರಿಜನಾಭ ದೇವರದೇವ ಸುಗುಣ ಬೇ ಲೂರ ಚೆನ್ನಿಗರಾಯನ ಎನ್ನಪ್ರಿಯನ ಹೊಸಬಗೆ ಮಾಟದ ಹೊಳೆವ ಕಿರೀಟದ | ಎಸೆವ ಮಾಣಿಕದೋಲೆಯ ॥ ಶಶಿಕಾಂತಕಧಿಕವೆಂದೆನಿಪ ಮೂಗುತಿಯಿಟ್ಟ | ಬಿಸಜಾಕ್ಷ ಚನ್ನಿಗರಾಯನ ಎನ್ನ ಪ್ರಿಯನ ತಿದ್ದಿದ ಕಸ್ತೂರಿ ತಿಲಕದಿಂದೊಪ್ಪುವ । ಮುದ್ದು ಮೊಗದ ಸೊಂಪಿನ ॥ ಹೊದ್ದಿದ ಕುಂಕುಮ ರೇಖೆ ಪೀತಾಂಬರ | ಪೊದೆದ ಚೆನ್ನಿಗರಾಯನ ಎನ್ನ ಪ್ರಿಯನ ಮಘಮಘಿಸುವ ಜಾಜಿ ಮಲ್ಲಿಗೆ ಸಂಪಿಗೆ । ಬಗೆಬಗೆ ಪೂಮಾಲೆಯ || ಅಗರು ಚಂದನ ಗಂಧದನುಲೇಪವ ಗೈದ । ಜಗವ ಮೋಹಿಪ ಚೆನ್ನನ ಎನ್ನ ಪ್ರಿಯನ ದನುಜರಗಂಡನೆಂದೆನಿಪ ಪೆಂಡೆಯವಿಟ್ಟು | ಮಿನುಗುವ ಪೊಂಗೆಜ್ಜೆಯ | ಘನ ಶಂಖ ಚಕ್ರ ಗದಾಂಕಿತನಾದನ | ಅನುಪಮ ಚೆನ್ನಿಗರಾಯನ ಎನ್ನ ಪ್ರಿಯನ ಲೀಲೆಯಿಂದಲಿ ಬಂದು ಮೇಲಾಪುರದಿ ನಿಂತ । ಪಾಲುಗಡಲ ಶಾಯಿಯಾದನ || ಪಾಲಕ ಇಂದು ಶ್ರೀ ಪುರಂದರವಿಠಲ | ಬೇಲೂರ ಚೆನ್ನಿಗರಾಯನ ಎನ್ನ ಪ್ರಿಯನ