ತಾಳಬೇಕು ತಕ್ಕ - ಮೇಳಬೇಕು - ಶ್ರೀ ।
ಲೋಲನ ಚರಿತೆಯ ಹೇಳುವ ದಾಸರಿಗೆ
ಗಳಶುದ್ದಿ ಇರಬೇಕು । ತಿಳಿದು ಪೇಳಲು ಬೇಕು |
ಕಳವಳಬಿಡಬೇಕು ಕಳೆಮೊಗವಿರಬೇಕು
ಯತಿ ಪ್ರಾಸವಿರಬೇಕು | ಗತಿಗೆ ನಿಲ್ಲಿಸಬೇಕು |
ಶ್ರುತಿಪತಿ ಕೇಳಬೇಕು | ರತಮುಖವಿರಬೇಕು
ಹರಿದಾಸನಾಗಿರಬೇಕು | ಹರುಷ ಪಡುತಿರಬೇಕು |
ಪುರಂದರವಿಠಲನಲಿ । ಸ್ಥಿರಚಿತ್ತವಿರಬೇಕು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ