ಕೀರ್ತನೆ - 12     
 
ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಲಸಿ ಇಲ್ಲದ ಪೂಜೆ ಸಿಂಧು ಸಾಗರ ಕೋಟಿ ಗಂಗೋದಕವಿದ್ದು ಗಂಧ ಸುಪರಿಮಳ ವಸ್ತ್ರವಿದ್ದು || ಅಂದವಾದಾಭರಣ ಧೂಪ-ದೀಪಗಳಿದ್ದು ವೃಂದಾವನ ಶ್ರೀ ತುಲಸಿಯಿಲ್ಲದ ಪೂಜೆ ಮಧುಕ್ಷೀರ ಮೊದಲಾದ ಪಂಚಾಮೃತಗಳಿದ್ದು ಮಧುಪರ್ಕ ಪೂಜೋಪಚಾರವಿದ್ದು ॥ ಮಧುಸೂದನ ಮುದ್ದು ಕೃಷ್ಣನ ಪೂಜೆಗೆ ಮುದದ ಮೋಹದಳೆಂಬ ತುಲಸಿಯಿಲ್ಲದ ಪೂಜೆ ಕಮಲ ಮಲ್ಲಿಗೆ ಜಾಜಿ ಸಂಪಿಗೆ-ಕೇದಿಗೆ ವಿಮಲ ಘಂಟೆ ಪಂಚವಾದ್ಯವಿದ್ದು ॥ ಅಮಲ ಪಂಚ ದಿವ್ಯ ಅಮೃತಾನ್ನಗಳಿದ್ದು ಕಮಲನಾಭನು ಶ್ರೀ ತುಲಸಿಯಿಲ್ಲದ ಪೂಜೆ ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು ತಂತು ತಪ್ಪದ ತಂತ್ರಸಾರವಿದ್ದು ॥ ಸಂತತ ಸುಖ ಸಂಪೂರ್ಣನ ಪೂಜೆಗ ತ್ಯಂತ ಪ್ರಿಯಳಾದ ತುಲಸಿಯಿಲ್ಲದ ಪೂಜೆ ಪೂಜೆಯ ಮಾಡದೆ ತುಲಸೀ ಮಂಜರಿಯಿಂದ ಮೂಜಗದೊಡೆಯ ಮುರಾರಿಯನು || ರಾಜಧಿರಾಜನೆಂಬ ಬಿರುದು ಮಂತ್ರಗಳಿಂದ ಪೂಜೆ ಮಾಡಿದರೇನು ಪುರಂದರ ವಿಠಲನ