ಒಂದೇ ನಾಮವು ಸಾಲದೆ - ಶ್ರೀಹರಿಯೆಂಬ
ಒಂದೇ ನಾಮವು ಸಾಲದೆ
ಒಂದೇ ನಾಮವು ಭವಬಂಧನ ಬಿಡಿಸುವು |
ದೆಂದು ವೇದಂಗಳಾನಂದದಿ ಸ್ತುತಿಸುವ
ಉಭಯರಾಯರು ಸೇರಿ ಮುದದಿ ಲೆತ್ತವನಾಡಿ |
ಸಭೆಯೊಳು ಧರ್ಮಜ ಸತಿಯ ಸೋಲೆ |
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು |
ಇಭರಾಜಗಮನೆಗಕ್ಷಯವಸ್ತ್ರವನಿತ್ತ
ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ |
ಸಂದೇಹವಿಲ್ಲದೆ ಹಲವು ಕಾಲ ॥
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ |
ಕಂದನಾರಗನೆಂದು ಕರೆಯಲಭಯವಿತ್ತ
ಕಾಶಿಯ ಪುರದೊಳು ಈಶ ಭಕುತಿಯಿಂದ |
ಸಾಸಿರನಾಮದ ರಾಮನೆಂಬ ॥
ಶ್ರೀಶನನಾಮದ ಉಪದೇಶ ಸತಿಗಿತ್ತ ।
ವಾಸುದೇವ ಶ್ರೀಪುರಂದರ ವಿಠಲನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ