ಕೀರ್ತನೆ - 9     
 
ಏತರ ಚೆಲುವ - ರಂಗಯ್ಯ ಏತರ ಚೆಲುವ ರಂಗಯ್ಯ ಶ್ರೀಹರಿಯೆಂಬ | ಮಾತಿಗೆ ಬರಿದೆ ಮರುಳಾದೆನಲ್ಲದೆ ದೇಶವಾಸಗಳುಳ್ಳೊಡೆ-ತಾ ಕ್ಷೀರವಾ | ರಾಶಿಯೊಳಗೆ ಮನೆ ಕಟ್ಟುವನೆ? ॥ ಹಾಸುವ ಮಂಚವುಳ್ಳೊಡೆ-ಶ್ರುತಿಹೀನ | ಶೇಷನ ಮೇಲೆ ಮಲಗುವೆನೆ? ಹಡೆದ ತಾಯಿ ತನಗುಳ್ಳೊಡೆ-ರಂಗ 1 ಹೊಡೆದು ಕರು-ತುರುಗೊಂಡು ಬಾಳುವನೆ? | ಮಡದಿಯರುಳ್ಳೊಡೆ ಅಡವಿಯೊಳಾಡುವ । ಹುಡುಗಿಯರ ಸಂಗ ಮಾಡುವನೆ? ಬುದ್ದಿ ಹೇಳುವ ಪಿತನುಳ್ಳೊಡೆ-ರಂಗ 1 ಕದ್ದು ಬೆಣ್ಣೆ ದಧಿ ಮೆಲ್ಲುವನೆ ? ॥ ನಿರ್ಧಾರ ವಾಹನವುಳ್ಳೊಡೆ-ಹಾರುವ । ಹದ್ದಿನ ಹೆಗಲೇರಿ ಬಾಹನೆ?-ರಂಗ ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ । ಧರೆಯ ದಾನಕ್ಕೆ ಕೈಯನೊಡ್ಡುವನೆ? ॥ ಗರುವ ತಾನಾದರೆ ಪಾಂಡುಕುಮಾರನ । ಧುರದ ಬಂಡಿಯ ಬೋವನಾಗುವನೆ? ಮದನಜನಕ ನಿಚ್ಚ ಚೆಲುವನೆಂತೆಂಬೆನೆ | ಮದದಿಂದ ಕುಬ್ಜೆಯ ಕೂಡುವನೆ? ॥ ಪದುಮನಾಭ ಸಿರಿ ಪುರಂದರವಿಠಲ | ಗದುಗಿನ ವೀರನಾರಾಯಣ-ರಂಗ