ಎನಗೊಬ್ಬ ದೊರೆ ದೊರಕಿದನು।
ವನಜಸಂಭವನಯ್ಯ ಹನುಮನಂತರ್ಯಾಮಿ
ಮಾತಾಪಿತನು ಆದ ಭ್ರಾತೃ ಬಾಂಧವನಾದ |
ಪ್ರೀತಿಯಿಂದಲಿ ತಾನೇ ನಾಥನಾದ ॥
ಖ್ಯಾತನು ತಾನಾದ ದಾತನು ತಾನಾದ ।
ಭೂತೇಶ ವಂದ್ಯ ವಿಭೂತಿಪ್ರದನಾದ
ಅಜರಾಮರನಾದ ಅಪ್ರಾಕೃತನಾದ ।
ವಿಜಯಗೊಲಿದು ನಿಜ ಸೂತನಾದ |
ಭುಜಗಶಯನನಾದ ತ್ರಿಜಗವಂದಿತನಾದ
ಅಜಮಿಳನಂತ್ಯಕತ್ಯಂತ ಸುಹೃದನಾದ
ಶಂಖ ಚಕ್ರಾಂಕಿತದ ಸಂಕರುಷಣನಾದ |
ಬಿಂಕದ ಬಿರುದುಗಳ ಪೊತ್ತವನಾದ ||
ಪಂಕಜನಯ್ಯನ ಮೀನಾಂಕ ಜನಕನಾದ |
ಓಂಕಾರ ಮೂರುತಿ ಪುರಂದರ ವಿಠಲನು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ