ಆಚ್ಯುತಾನಂತ ಗೋವಿಂದ ಹರಿ ।
ಸಚ್ಚಿದಾನಂದ ಸ್ವರೂಪ ಮುಕುಂದ
ಕೇಶವ ಕೃಷ್ಣ ಮುಕುಂದ-ಹರಿ |
ವಾಸುದೇವ ಗುರು ಜಗದಾದಿವಂದ್ಯ ||
ಯಶೋದೆಯ ಸುಕೃತದ ಕಂದ-ನಮ್ಮ ||
ಶೇಷಶಯನ ಭಕ್ತ ಹೃದಯಾನಂದ
ನಾರಾಯಣ ನಿನ್ನ ನಾಮ-ಎನ್ನ ।
ನಾಲಿಗೆಯೊಳಗಿರಬೇಕೆಂಬ ನೇಮ ||
ನಾನು ಬೇಡುವೆ ನಿನ್ನ ಪ್ರೇಮ-ಎನ್ನ ।
ಪಯಣ ಸಮಯಕೊದಗಲಿ ಗುಣಧಾಮ
ಮಾಧವ ಮಂಗಳಗಾತ್ರ-ಸ್ವಾಮಿ ।
ಯಾದವ ಕೈಲಾಸವಾಸನ-ಮಿತ್ರ |
ಮಹಿಮೆ ಕೇಳಿದರೆ ವಿಚಿತ್ರ-ಎನ್ನ ।।
ಮನಮೆಚ್ಚಲಿ ಸತ್ಯಭಾಮಾಕಳತ್ರ
ಗೋವಿಂದ ಗೋಪಾಲ ಬಾಲ-ಸೋಳ |
ಸಾವಿರ ಗೋಪಿಯರ ಆನಂದಲೀಲಾ ||
ಜೀವಮಣಿಯ ಮುಕ್ತಾಮಾಲಾ-ನಿನ್ನ ||
ನೇನೆಂದು ಕರೆಯಲಿ ಸುಗ್ರೀವಪಾಲ
ವಿಷ್ಣುಚಕ್ರವು ಬಂದು ಸುತ್ತಿ-ಮೂರು |
ಸೃಷ್ಟಿಯನೆಲ್ಲವ ತಿರುಗಿ ಬೆನ್ನಟ್ಟಿ ||
ಕೃಷ್ಣ ಸಲಹೆಂದು ಮೊರೆಯಿಟ್ಟ-ಮುನಿ ॥
ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ
ಮಧುಸೂದನ ಮಾರಜನಕ-ನೀನು |
ಮದಗಜ ಸೀಳಿ ಮಲ್ಲರ ಗೆಲಿದೆ ತವಕ ॥
ಒದಗಿ ಕಂಸನ ಕೊಂದ ಬಳಿಕ-ನೀ ||
ಮುದುಕಗೆ ಪಟ್ಟವ ಕಟ್ಟಿದೆ ಧನಿಕ
ತ್ರಿವಿಕ್ರಮ ತ್ರೈಲೋಕ್ಯನಾಥ-ದೇವ 1
ತ್ರಿಪುರರ ಸತಿಯರ ವ್ರತಕೆ ವಿಘಾತ ॥
ಯದುವಂಶ ಪಾಂಡವ ಪ್ರೀತ-ಎನ್ನ ।।
ಹೃದಯದೊಳಡಗಿರೊ ಶ್ರೀ ಜಗನ್ನಾಥ
ವಾಮನರೂಪದಿ ಬಂದು-ಬಲಿಯ |
ದಾನವ ಬೇಡಲು ಉಚಿತವು ಎಂದು ।
ಧಾರೆಯನೆರೆಯಲು ಅಂದು-ಬೆಳೆದು ।।
ಧಾರಿಣಿಯೆಲ್ಲವನಳೆದೆ ನೀನಂದು
ಶ್ರೀಧರ ಶೃಂಗಾರಾಧಾರ-ದಿವ್ಯ |
ಶ್ರೀವತ್ಸಲಾಂಛನ ಶ್ರೀರಘುವೀರ ॥
ವಾರಿಧಿಸಮ ಗಂಭೀರ-ಗೈದೆ |
ಕ್ರೂರರಕ್ಕಸರನೆಲ್ಲರ ಸಂಹಾರ
ಹೃಷಿಕೇಶ ವೃಂದಾವನದಲಿ-ನೀ ।
ನಿಶೆಯಲಿ ಕೊಳಲನೂದುತ ಇರಲಿಲ್ಲ ||
ಋಷಿವೃಂದವಂದ್ಯ ನಿನ್ನಗಲಿ-ನಿ ।
ಮಿಷವು ಬಿಟ್ಟಿರಲಾರೆ ನಿಲ್ಲೋ ಮನದಲಿ
ಪದ್ಮನಾಭನೆ ಕೇಳೊ ಮುನ್ನ-ಎನ್ನ |
ಸುದ್ದಿಯನೆಲ್ಲವ ಉಸಿರುವೆ ಘನ್ನ ॥
ಅದೈತರೂಪ ಪ್ರಸನ್ನ-ಸ್ವಾಮಿ |
ಇದ್ದ ಠಾವಿಗೆ ಕರೆದೊಯ್ಯೋ ನೀನೆನ್ನ
ದಾಮೋದರ ದನುಜಹರಣ-ಹರಿ ।
ರಾಮಚಂದ್ರನೆ ರಘುಕುಲ ಸಾರ್ವಭೌಮ ||
ಸ್ವಾಮಿ ನೀಲ ಮೇಘಶ್ಯಾಮ-ದೇವ |
ಭೂಮಿಜಾಪತಿಯೆಂಬ ಬಹುಪುಣ್ಯನಾಮ
ಸಂಕರ್ಷಣ ಸರುವಾಭರಣ-ಇಟ್ಟು ।
ಪಂಕಜಮುಖಿ ದ್ರೌಪದಿ ಮೇಲೆ ಕರುಣ |
ಕುಂಕುಮಾಂಕಿತ ನೀಲಕಿರಣ-ರತ್ನ 1
ಕಂಕಣಭೂಷಣ ಕೌಸ್ತುಕಾಭರಣ
ವಾಸುದೇವ ಕೇಳೊ ನಿನ್ನ-ದಿವ್ಯ |
ಸಾಸಿರನಾಮವ ನೆನೆವನೆ ಧನ್ಯ ||
ಬೇಸರದೆ ಸಲಹಬೇಕೆನ್ನ-ಸ್ವಲ್ಪ |
ಗಾಸಿಯ ಮಾಡದೆ ಕರುಣ ಸಂಪನ್ನ
ಪ್ರದ್ಯುಮ್ನ ನೀನೆಂದು ಕರೆಯೆ-ದುರ್ |
ಬುದ್ದಿಯನೆಲ್ಲವ ನನ್ನಿಂದ ಮರೆಯೆ |
ಇದ್ದ ದುರ್ವಿಷಯವ ತೊರೆಯೆ-ಸಾಧು ।
ಸಜ್ಜನ ಸಂಗನೆ ನಿನ್ನೊಳು ಬೆರೆಯೆ
ಅನಿರುದ್ಧ ಗೋಕುಲದಲ್ಲಿ-ನೀ
ಅನುದಿನ ಇರಲು ಗೋಪಿಯರ ಮನೆಯಲಿ ||
ಸನಕಾದಿವಂದ್ಯ ನಿನ್ನಗಲಿ-ಒಂದು 1
ಕ್ಷಣವೂ ಬಿಟ್ಟಿರಲಾರೆ ನಿಲ್ಲೋ ಮನದಲಿ
ಪುರುಷೋತ್ತಮಗಾರು ಸಾಟಿ?-ಶ್ರೀ ।
ಪರಬ್ರಹ್ಮಸ್ವರೂಪ ನಿನಗಾರು ಧಾಟಿ? ।
ನಿರವದ್ಯ ಭಕ್ತಿ ಕಿರೀಟ-ನಿನ್ನ ।
ಶರೀರದೊಳಗೆ ಕಂಡು ಬ್ರಹ್ಮಾಂಡ ಕೋಟಿ
ಅಧೋಕ್ಷಜ ಅಸುರಸಂಹಾರಿ-ದೇವ ।
ಅದುಭುತ ರೂಪನೆ ಶಿಶುಪಾಲ ವೈರಿ||
ಭಜಕರ ಪಾಲಿಪ ಶೌರಿ-ನೀ ।
ಅಜಮಿಳ ಕರೆದರೆ ಕಾಯ್ದೆ ಮುರಾರಿ
ನರಸಿಂಹರೂಪವ ತಾಳಿ-ಬಂದೆ 1
ಕರೆಯೆ ಕಂಬದಿ ಕಂದನ ಮಾತಕೇಳಿ |
ದುರುಳ ರಕ್ಕಸನನು ಸೀಳಿ-ನಿನ್ನ 1
ಕೊರಳಲಿ ಧರಿಸಿದೆ ಕರುಳಿನ ಮಾಲಿ
ಅಚ್ಯುತ ನೀನಲೆ ಮುದ್ದು-ಗೋಪಿ 1
ಬಚ್ಚಿಟ್ಟ ಹಾಲು-ಮೊಸರು-ಬೆಣ್ಣೆ ಮೆದ್ದು ||
ತಚ್ಛ ಶಕಟನ ಕಾಲಿಲೊದ್ದು-ಕರು |
ಬಿಚ್ಚಿ ಓಡಿದೆ ಚೋರಕಂಡಿಯಲಿ ಕದ್ದು |
ಜನಾರ್ದನ ಕೇಳೊ ಬಿನ್ನಪವ-ನೀ ।
ತೊಲಗಿಸು ಬಂದೆನ್ನ ಮನದ ಕಲುಷವ ॥
ಹೊರಲಾರೆ ಭೂ ಭಾರತನುವ-ನಿನ್ನ |
ಸ್ಮರಣೆ ಇದ್ದವ ಮುಕ್ತಿಪಥವನೆ ಗೆಲುವ |
ಉಪೇಂದ್ರನುರಗನ ತುಳಿಯೆ-ಆಗ 1
ಅಪರಿಮಿತ ವಿಷದ ಮಡುವು ಕಲಕಿ ಉಳಿಯೆ ||
ತ್ರಿಪುರರಕ್ಕಸರನು ಗೆಲಿಯೆ-ನಿನ್ನ |
ಚಪಲತನವ ನೋಡಿ ಸುರರೆಲ್ಲ ಬೆರೆಯೆ
ಹರಿಹರಿ ಎಂದರೆ ಪಾಪ-ರಾಶಿ |
ಹರಿದು ಹೋಗುವದು ಮನದ ಸಂತಾಪ ॥
ಸರುವರೊಳಗೆ ವಿಶ್ವರೂಪ-ನಿನ್ನ |
ನೆರೆನಂಬಿದವರನು ಸಲಹು ಪ್ರತಾಪ
ಕೃಷ್ಣ ಕೃಷ್ಣನೆಂಬ ಸೊಲ್ಲ-ಕೇಳಿ |
ನಷ್ಟವಾಗಿ ಹೋಯ್ತು ಪಾತಕವೆಲ್ಲ |
ಮುಟ್ಟಿ ಭಜಿಸಿರಿ ಜನರೆಲ್ಲ, ಪುರಂದರ |
ವಿಠಲನಲ್ಲದೆ ಪರದೈವವಿಲ್ಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಹರಿ ಸಂಕೀರ್ತನೆ