ಕೀರ್ತನೆ - 1     
 
ಗಜವದನ ಬೇಡುವೆ ಗೌರೀತನಯ ತ್ರಿಜಗವಂದಿತನೆ ಸುಜನರ ಪೊರೆವನೆ ಪಾಶಾಂಕುಶ ಧರ ಪರಮ ಪವಿತ್ರ | ಮೂಷಕವಾಹನ ಮುನಿಜನ ಪ್ರೇಮ ಮೋದದಿಂದಲಿ ನಿನ್ನ ಪಾದವ ನಂಬಿದೆ | ಸಾಧುವಂದಿತನೆ ಅನಾದರ ಮಾಡದೆ ಸರಸಿಜನಾಭ ಶ್ರೀ ಪುರಂದರ ವಿಠಲನ | ನಿರುತ ನೆನೆಯುವಂತೆ ವರ ದಯ ಮಾಡೊ